ಸಾಮಾಜಿಕ ಹೋರಾಟಗಾರ ರಾಜಶೇಖರ್ ಮುಲಾಲಿಯಿಂದ ಪಾದಯಾತ್ರೆ ಆರಂಭವಾಗಿದೆ. ಬಳ್ಳಾರಿಯಿಂದ ಆರಂಭಗೊಂಡಿರುವ ಪಾದಯಾತ್ರೆ ಬೆಂಗಳೂರುವರೆಗೆ ನಡೆಯಲಿದೆ. ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ಅಣ್ಣಾ ಹಜಾರೆ ಫೌಂಡೇಶನ್ ವತಿಯಿಂದ 50ಕ್ಕೂ ಹೆಚ್ಚು ಸದಸ್ಯರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಬಳ್ಳಾರಿಯ ಮೋತಿ ವೃತ್ತದ ಬಳಿ ಧ್ವಜಾರೋಹಣ ಮಾಡಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಕಲ್ಯಾಣಮಠ ಶ್ರೀ, ನಂದಿಪುರ ಸ್ವಾಮೀಜಿ, ಹೂವಿನಹಡಗಲಿ ಗವಿಮಠದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಪಾದಯಾತ್ರೆಯುದ್ದಕ್ಕೂ ಮತದಾನ ಜಾಗೃತಿ, ಜಾಗೃತಿ ಶಿಬಿರ, ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ