ಮುಂಬೈ : ಅನಾಮಧೇಯ ಪ್ರೇಮ ಪತ್ರದಿಂದ ತರಗತಿಯಲ್ಲಿ ಅವಮಾನವಾದ ಕಾರಣ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಪಂಡರಾಪುರದಲ್ಲಿ ನಡೆದಿದೆ. ಪಂಡರಾಪುರದ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಗೆ ತರಗತಿಯ ವೇಳೆ ಹಿಂದೆ ಇದ್ದ ಸಹಪಾಠಿಯೊಬ್ಬರು ಅನಾಮಧೇಯ ಪ್ರೇಮ ಪತ್ರ ನೀಡಿದ್ದಾರೆ. ಆ ವೇಳೆ ಅದನ್ನು ನೋಡಿದ ಶಿಕ್ಷಕಿ ಮನಬಂದಂತೆ ನಿಂದಿಸಿದ್ದಲ್ಲದೇ ಆಕೆಯ ಪೋಷಕರಿಗೆ ಕರೆ ಮಾಡಿ ಕಂಪ್ಲೇಂಟ್ ಮಾಡಿದ್ದಾರೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಮನೆಗೆ ಬಂದು ನೇಣು ಹಾಕಿಕೊಂಡು ಆತ್ಮಹತ್ಯೆ