ಬೆಂಗಳೂರು : ಸಚಿವ ಸಂಪುಟದ ಬಳಿಕ ಇದೀಗ ಸಿಎಂ ಯಡಿಯೂರಪ್ಪ ಅವರಿಗೆ ಖಾತೆ ಹಂಚಿಕೆಯ ವಿಚಾರದಲ್ಲಿ ತಲೆಬಿಸಿ ಶುರುವಾಗಿದೆ ಎನ್ನಲಾಗಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟ ರಚನೆಯಾಗಿದೆ . 17 ಶಾಸಕರು , ರಾಜಭವನದಲ್ಲಿ ನಿನ್ನೆ ನಡೆದ ಸರಳ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಸಚಿವ ಸ್ಥಾನ ಹಂಚಿಕೆಯಲ್ಲಿ ಬಾರೀ ಅಸಮಾಧಾನ ಬುಗಿಲೆದ್ದಿದ್ದು, ಅದೇರೀತಿ ಇದೀಗ ಖಾತೆ ಹಂಚಿಕೆಯಲ್ಲಿ ಎಡವಟ್ಟು ಆಗದಂತೆ ಸಿಎಂ ಎಚ್ಚರಿಕೆ ವಹಿಸಿದ್ದಾರೆ