ರಾಜ್ಯಾದ್ಯಂತ ವನ್ಯ ಜೀವಿಗಳ ಉಪಟಳ ಜಾಸ್ತಿಯಾಗಿದೆ. ಮೈಸೂರು ಜಿಲ್ಲೆಯಲ್ಲಿ ಚಿರತೆಗಳ ಭೀತಿ ಜಾಸ್ತಿಯಾಗಿದ್ದು, ಮೈಸೂರಿನ ಟಿ. ನರಸೀಪುರ ತಾಲ್ಲೂಕಿನ ಮುಸುವಿನ ಕೊಪ್ಪಲು ಗ್ರಾಮದಲ್ಲಿ ಅರಣ್ಯ ಇಲಾಖಾಧಿಕಾರಿಗಳು ಇರಿಸಿದ್ದ ಬೋನಿಗೆ ಮತ್ತೊಂದು ಚಿರತೆ ಬಿದ್ದಿದೆ. ಈ ಹಿಂದೆಯು ಮುಸುವಿನ ಕೊಪ್ಪಲು ಗ್ರಾಮದ ಚಂದ್ರಪ್ಪ ಎಂಬುವರ ಜಮೀನಿನಲ್ಲಿ ಬೋನಿಗೆ ಎರಡು ಚಿರತೆಗಳು ಬಿದ್ದಿದ್ದವು.