ವಿಜಯಪುರ : ವಿಜಯಪುರದಲ್ಲಿ ಅಪ್ರಾಪ್ತೆ ದಾನಮ್ಮ ನ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಘಟನೆ ಮಾಸುವ ಮೊದಲೆ ಮತ್ತೊಂದು ಅತ್ಯಾಚಾರವೆಸಗಿದ ಘಟನೆ ನಡೆದಿದೆ. ವಿಜಯಪುರದ ಇಂಡಿ ತಾಲೂಕಿನ ಚಡಚಣದಲ್ಲಿ ಪರಿಚಯಸ್ಥನಾಗಿದ್ದ ಕಾಮುಕನೊಬ್ಬ ನೀರು ಕೇಳುವ ನೆಪದಲ್ಲಿ ಮನೆಯೊಳಗೆ ನುಗ್ಗಿ ಅಪ್ರಾಪ್ತ ಬಾಲಕಿಯ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರವೆಸಗಿದ್ದಾನೆ. ಆತನ ಜೊತೆ ಇದ್ದ ಮೂವರು ಸ್ನೇಹಿತರು ಮುಖಕ್ಕೆ ಬಟ್ಟೆಕಟ್ಟಿಕೊಂಡು ಕಾಮುಕನಿಗೆ ಸಾಥ್ ನೀಡಿದ್ದಾರೆ. ಅತ್ಯಾಚಾರವೆಸಗಿದ ಬಳಿಕ ಬಾಲಕಿಗೆ ಬೆದರಿಕೆ ಹಾಕಿ ಪಾಪಿಗಳು