Widgets Magazine

ಕೊರೋನಾಗೆ ಮತ್ತೊಬ್ಬ ಬಲಿ : ಸಾವಿನ ಸಂಖ್ಯೆ 14

ಕಲಬುರಗಿ| Jagadeesh| Last Modified ಗುರುವಾರ, 25 ಜೂನ್ 2020 (21:05 IST)
ಕೊರೊನಾ ಮಾರಿಗೆ ರಾಜ್ಯದ ಈ ಜಿಲ್ಲೆಯಲ್ಲಿ ಮತ್ತೊಂದು ಜೀವ ಬಲಿಯಾಗಿದೆ.

ಕೊರೋನಾ‌ ಸೋಂಕಿನಿಂದ ಕಲಬುರಗಿ ನಗರದ ಇಸ್ಲಾಮಾಬಾದ ಕಾಲೋನಿಯ 61 ವರ್ಷದ ವೃದ್ಧ (P-10270) ಮೃತಪಟ್ಡಿದ್ದಾನೆ.

ಇದರಿಂದ ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ ‌14ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

ಕೆಮ್ಮು, ಉಸಿರಾಟ ತೊಂದರೆ ಹಾಗೂ ಅಧಿಕ ರಕ್ತದೊತ್ತಡ ಹಿನ್ನೆಲೆಯಲ್ಲಿ ಇವರು ಕಳೆದ ಜೂನ್  22 ರಂದು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿ ಜೂನ್ 23 ಕ್ಕೆ ನಿಧನ ಹೊಂದಿದ್ದು, ಯಾವ ಮೂಲದಿಂದ ಸೋಂಕು ತಗುಲಿದೆ ಎಂಬುದರ ಪತ್ತೆ ಕಾರ್ಯ ನಡೆದಿದೆ.


ಇದರಲ್ಲಿ ಇನ್ನಷ್ಟು ಓದಿ :