ಮಾರಣಾಂತಿಕ ಕೊರೊನಾಕ್ಕೆ ರಾಜ್ಯದಲ್ಲಿ ಮತ್ತೊಬ್ಬರು ಬಲಿಯಾಗಿದ್ದಾರೆ. ತೀವ್ರ ಶ್ವಾಸಕೋಶ ತೊಂದರೆ, ಅಸ್ತಮಾ, ಲಂಗ್ ಡಿಸೀಸ್ ಸೇರಿದಂತೆ ತೀವ್ರತರ ಕಾಯಿಲೆಗಳಿಂದ ಬಳಲುತ್ತಿದ್ದ 62 ವಯೋಮಾನದ ಕೋವಿಡ್-19 ರೋಗಿ ಸಂಖ್ಯೆ 640 ಮೃತಪಟ್ಟಿದ್ದಾರೆ. ರಾಜ್ಯ ಆರೋಗ್ಯ ವೈದ್ಯಕೀಯ ತಜ್ಞರ ತಂಡ, ಜಿಲ್ಲಾ ವೈದ್ಯಕೀಯ ತಂಡದ ನಿರಂತರ ಪ್ರಯತ್ನ ನಡೆಸಿದರೂ, ಇಂದು ಬೆಳಗಿನ ಜಾವ ಅವರು ಮೃತಪಟ್ಟಿದ್ದಾರೆ.ವಿಜಯಪುರ ಜಿಲ್ಲಾಡಳಿತವು ರೋಗಿಯ ಕುಟುಂಬಸ್ಥರ ಸಹಕಾರದೊಂದಿಗೆ ಸರಕಾರದ ನಿರ್ದೇಶನದಂತೆ ಮೃತರ ಅಂತ್ಯಸಂಸ್ಕಾರ ನೆರವೇರಿಸಿದೆ ಎಂದು ಜಿಲ್ಲಾಧಿಕಾರಿ ವೈ. ಎಸ್