ರಾಜ್ಯ ರಾಜಕೀಯದಲ್ಲಿ ಇಷ್ಟೆಲ್ಲಾ ಗೊಂದಲ ನಡೆಯುತ್ತಿದೆ. ಆದರೆ ನನಗೆ ಬೆಂಗಳೂರಿಗೂ ಬಾ ಅಂತಾ ಯಾರೂ ಕರೆದಿಲ್ಲ. ಹೀಗಂತ ಕಾಂಗ್ರೆಸ್ ನ ಹಿರಿಯ ಶಾಸಕ ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ.ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರ ಶಿವಶಂಕರಪ್ಪ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.ದಾವಣಗೆರೆಯಲ್ಲಿ ಹೇಳಿಕೆ ನೀಡಿದ ಶಾಸಕ ಶಾಮನೂರ ಶಿವಶಂಕ್ರಪ್ಪ, ನಾನು ಬೆಂಗಳೂರಿಗೆ ಹೋಗಲ್ಲ. ನನಗೆ ಯಾರೂ ಕರೆದಿಲ್ಲ. ಸದ್ಯಕ್ಕೆ ಸರ್ಕಾರ ಏನು ಆಗುತ್ತದೆ ಅಂತಾ ಹೇಳುವುದು ಕಷ್ಟ. ಸಿದ್ದರಾಮಯ್ಯ ಅಥವಾ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಿತ್ತಾರೆ