ಬೆಂಗಳೂರು: ಯಾವ ಸಿನಿಮಾಗೂ ಕಮ್ಮಿಯಿಲ್ಲದಂತೆ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿರುವ ರಾಜ್ಯ ರಾಜಕಾರಣದಲ್ಲಿ ನಾಳೆ ನಡೆಯಲಿರುವ ವಿಶ್ವಾಸ ಮತದತ್ತ ಎಲ್ಲರ ಕಣ್ಣು ನೆಟ್ಟಿದೆ. ಒಂದು ವೇಳೆಯೂ ನಾಳೆಯೂ ಚರ್ಚೆ ನೆಪದಲ್ಲಿ ಕಾಲಹರಣ ಮಾಡಿಕೊಂಡು ವಿಶ್ವಾಸ ಮತ ನಡೆಸದೇ ಇದ್ದರೆ ರಾಜ್ಯಪಾಲರು ಕೇಂದ್ರಕ್ಕೆ ವರದಿ ಕಳುಹಿಸುವ ಸಾಧ್ಯತೆಯಿದೆ.ಈ ವರದಿಯ ಅನ್ವಯ ಕೇಂದ್ರ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿದರೂ ಅಚ್ಚರಿಯಿಲ್ಲ. ಆದರೆ ದೋಸ್ತಿ ಪಕ್ಷಗಳೂ ಇದಕ್ಕೇ ಕಾಯುತ್ತಿರುವಂತಿದೆ. ಆ ರೀತಿ ಮಾಡುವುದರಿಂದ ಬಿಜೆಪಿಗೆ