ಮಾಜಿ ಡಿವೈಎಸ್`ಪಿ ಅನುಪಮಾ ಶೆಣೈ ರಾಜಕೀಯ ಎಂಟ್ರಿಗೆ ವೇದಿಕೆ ಸಿದ್ಧವಾಗುತ್ತಿದೆ. ಹೊಸ ಪಕ್ಷ ಕಟ್ಟುವ ಮೂಲಕ ರಾಜಕೀಯ ಎಂಟ್ರಿಗೆ ಮಾಜಿ ಪೊಲೀಸ್ ಅಧಿಕಾರಿ ಯೋಜನೆ ರೂಪಿಸುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಸದ್ಯ ಸಮಾಜದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಹೊಸ ಪಕ್ಷ ಕಟ್ಟಲು ಮುಂದಾಗಿದ್ದಾನೆ. ಪೊಲೀಸ್ ಹಿನ್ನೆಲೆ ಇರುವುದರಿಂದ ಪೊಲಿಸಿಂಗ್ ಮಾದರಿಯಲ್ಲೇ ಪಕ್ಷದ ರೂಪುರೇಷೆ ಸಿದ್ಧಪಡಿಸುತ್ತೇನೆ. ಒಂದು ತಿಂಗಳಲ್ಲಿ ಪಕ್ಷದ ಘೋಷಣೆ ಯೋಜನೆಯನ್ನ ಬಹಿರಂಗಪಡಿಸುತ್ತೇನೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.ಸೂಪರ್ ಸ್ಟಾರ್