ಕರ್ನಾಟಕದಲ್ಲಿರುವವರು ಕನ್ನಡಿಗರೇ,ಕನ್ನಡ ಕಲಿಕೆ ಕಡ್ಡಾಯ: ಸಿಎಂ

ಬೆಂಗಳೂರು:| Rajesh patil| Last Modified ಬುಧವಾರ, 1 ನವೆಂಬರ್ 2017 (14:35 IST)
ಕರ್ನಾಟಕ ರಾಜ್ಯದಲ್ಲಿ ವಾಸಿಸುವವರು ಎಲ್ಲರೂ ಕನ್ನಡಿಗರೇ.ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಕಲಿಯುವುದು ಕಡ್ಡಾಯ ಎಂದು ಹೇಳಿದ್ದಾರೆ. 
62ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ ಅವರು, ರಾಜ್ಯದಲ್ಲಿರುವ ಪ್ರತಿಯೊಂದು ಶಾಲೆಯಲ್ಲಿ ಕನ್ನಡ ಕಲಿಸಲೇಬೇಕು ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. 
 
ಯಾವುದೇ ರಾಜ್ಯದಿಂದ ಬಂದವರಾಗಿರಲಿ, ರಾಜ್ಯದಲ್ಲಿ ನೆಲಸುವವರೆಲ್ಲಾ ಕನ್ನಡಿಗರು. ಅವರು ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸಬೇಕು. ನಾನು ಯಾವುದೇ ಸಮುದಾಯದ ಅಥವಾ ಭಾಷೆಯ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದರು. 
 
ರಾಜ್ಯದಲ್ಲಿ ವಾಸಿಸುವವರು ಕನ್ನಡ ಭಾಷೆಯನ್ನು ಕಲಿಯದಿದ್ದಲ್ಲಿ ನೀವು ಕನ್ನಡ ಭಾಷೆಗೆ ಅಪಮಾನ ಮಾಡುತ್ತಿದ್ದೀರಿ ಎಂದು ಅರ್ಥ . ಕನ್ನಡಿಗರು ಮಾತೃ ಭಾಷೆಯ ಪ್ರೇಮವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕು. ಕನ್ನಡ ಭಾಷೆಯ ಮೇಲಿನ ದೌರ್ಜನ್ಯ ಸರಕಾರ ಸಹಿಸೋಲ್ಲ ಎಂದು ಗುಡುಗಿದರು. 
 
ಕಳೆದ 60 ವರ್ಷಗಳ ಅವಧಿಯಲ್ಲಿ ಕನ್ನಡ ಭಾಷೆಗೆ ನಿರೀಕ್ಷಿತ ಮಟ್ಟದಲ್ಲಿ ಆದ್ಯತೆ ನೀಡುವಲ್ಲಿ ವಿಫಲವಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :