ಸಿಲಿಕಾನ್ ಸಿಟಿಯಲ್ಲಿ ಎಲ್ಲಿ ನೋಡಿದ್ರೂ ಸಂಚಾರ ದಟ್ಟನೆ. ಪೀಕ್ ಅವರ್ಸ್ ನಲ್ಲಂತೂ ಹೇಳೋದೆ ಬೇಡ. ಅದ್ರಲ್ಲೂ ಬೆಂಗಳೂರಿನ ಅರ್ಧ ಟ್ರಾಫಿಕ್ಗೆ ಈ ಮಾರುಕಟ್ಟೆಯೇ ಕಾರಣವಂತೆ. ಹೌದು, ಯಶವಂತಪುರ APMC ಮಾರ್ಕೆಟ್ ಗೆ ಎಂಟ್ರಿಯಾಗುವ ಸಾವಿರಾರು ಲಾರಿಗಳು ಟ್ರಾಫಿಕ್ ಸಮಸ್ಯೆಯನ್ನ ತಂದೊಡ್ಡುತ್ತಿದ್ಯಂತೆ. ಇದಕ್ಕೆ ಪರಿಹಾರ ಎಂಬಂತೆ ಈಗ APMC ಮಾರ್ಕೆಟ್ ಬೇರೆ ಕಡೆಗೆ ಶಿಫ್ಟ್ ಮಾಡಲಾಗ್ತಿದೆ. ರಾಜ್ಯದ ನಾನಾ ಭಾಗಗಳಿಂದ ಮಾತ್ರವಲ್ಲ, ಪರರಾಜ್ಯಗಳಿಂದ ಬರೋ ಸಾವಿರಾರು ಲಾರಿಗಳಿಗೆ ಇದು ಆಶ್ರಯದಾಣವಾಗಿದೆ.ಅಷ್ಟೇ