ಬೆಂಗಳೂರು : ರಾಜ್ಯ ಸರ್ಕಾರ ಪಿತೂರಿ ನಡೆಸುತ್ತಿದೆ. ಬಿಜೆಪಿಯ ಶಾಸಕರನ್ನು ಸೆಳೆಯುವ ಕೆಲಸ ಮಾಡುತ್ತಿದೆ. ಬಿಜೆಪಿಯ ನಾಯಕರೂ ಕೂಡ ಈ ಪಿತೂರಿಯ ಭಾಗವಾಗಿದ್ಧಾರೆಂದು ಬಿಜೆಪಿ ನಾಯಕ ಅರವಿಂದ್ ಲಿಂಬಾವಳಿ ಅವರು ಬಾಂಬ್ ಸಿಡಿಸಿದ್ದಾರೆ. ಮುಖ್ಯಮಂತ್ರಿಗಳ ವಿಶ್ವಾಸ ಮತ ಯಾಚನೆ ಇವತ್ತು ನಡೆಯುತ್ತೆ, ಆವತ್ತು ನಡೆಯುತ್ತೆ ಎಂಬ ಖಚಿತತೆ ಇನ್ನೂ ಸಿಕ್ಕಿಲ್ಲ. ಬಹುತೇಕ ಅತೃಪ್ತ ಶಾಸಕರು ಒಗ್ಗಟ್ಟಿನಿಂದಿದ್ದು ಸದನಕ್ಕೆ ಬರುವುದಿಲ್ಲ ಆದರೂ ಕೇಸರಿ ಪಾಳಯದಲ್ಲಿ ಆತಂಕದ ಛಾಯೆ ಸ್ವಲ್ಪ ಮಟ್ಟಕ್ಕೆ ಇದ್ದೇ