ದೇವಸ್ಥಾನದ ಆರ್ಚಕ ಮಹಿಳೆಯೊಂದಿಗೆ ಹೊಂದಿದ್ದ ಅನೈತಿಕ ಸಂಬಂಧದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರಿಂದ ಆರ್ಚಕನನ್ನು ದೇವಸ್ಥಾನದ ಆರ್ಚಕ ಸ್ಥಾನದಿಂದ ಹೊರಹಾಕಲಾಗಿದೆ. ಐತಿಹಾಸಿಕ ಅಂಜನಾದ್ರಿ ಬೆಟ್ಟದ ಆಂಜನೇಯ ದೇವಸ್ಥಾನದ ಆರ್ಚಕ ವಿದ್ಯಾದಾಸ ಬಾಬಾ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಫೋಟೋಗಳು ವೈರಲ್ ಆಗಿದ್ದರಿಂದ ಆರ್ಚಕನಿಂದ ದೇವಸ್ಥಾನ ಅಪವಿತ್ರವಾಗಿದೆ ಎಂದು ಟ್ರಸ್ಟಿಗಳು ಸಭೆ ನಡೆಸಿ ಆರ್ಚಕನನ್ನು ತೆಗೆದು ಹಾಕಿದ್ದಾರೆ.ಈ ಕುರಿತು ಆರ್ಚಕ, ತಮ್ಮ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ