ಬೆಂಗಳೂರು : ಪ್ರಶ್ನೆ : ಮಧುಮೇಹಿಗಳಿಗೆ ಲೈಂಗಿಕ ತೊಂದರೆಗಳು ಹೆಚ್ಚು ಕಾಡುತ್ತದೆಯೇ? ದಯವಿಟ್ಟು ತಿಳಿಸಿ. ಉತ್ತರ : ಇಲ್ಲ ಹಾಗೂ ಹೌದು. ಡಯಾಬಿಟಿಸ್ ಬಂದ ಮಾತ್ರಕ್ಕೆ ಲೈಂಗಿಕ ಶಕ್ತಿ ಕುಂದುವುದಿಲ್ಲ. ಆದರೆ ರಕ್ತ ಸಕ್ಕರೆಯ ಮಟ್ಟದಲ್ಲಿ ಪದೇಪದೇ ಏರುಪೇರಾಗುತ್ತಿದ್ದರೆ ವರ್ಷಾನುಗಟ್ಟಲೆ ಸಕ್ಕರೆಯ ಪ್ರಮಾಣ ನಿಯಂತ್ರಣದಲ್ಲಿರದಿದ್ದರೆ ಲೈಂಗಿಕ ಸಮಸ್ಯೆಗಳು ತಲೆದೋರಬಹುದು. ಜನನೇಂದ್ರಿಯದ ಸುತ್ತ ತುರಿಕೆ, ಗಾಯ, ಗುಳ್ಳೆ ಇತ್ಯಾದಿಗಳು ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ ಒಮ್ಮೆ ರಕ್ತ ಸಕ್ಕರೆಯ ಪರೀಕ್ಷೆ ಮಾಡಿಸುವುದು ಉಚಿತ.ಯಾಕೆಂದರೆ ಅದು ನಿಯಂತ್ರಣದಲ್ಲಿರದ