ಕೇಂದ್ರ ಬರ ಅಧ್ಯಯನ ತಂಡ ರಾಜ್ಯದ ವಿವಿಧೆಡೆ ಬೆಳೆ ಹಾನಿ, ಮೇವು ಬ್ಯಾಂಕ್, ಕೆರೆಗಳಿಗೆ ಭೇಟಿ ನೀಡುತ್ತಿದೆ. ಏತನ್ಮಧ್ಯೆ ಉನ್ನತ ಅಧಿಕಾರಿಗಳಿರುವ ತಂಡಕ್ಕೆ ರೈತರು ಬೆವರಿಸಿದ್ದಾರೆ.ಕೇಂದ್ರ ಬರ ತಂಡದಿಂದ ವಿಜಯಪುರ ಜಿಲ್ಲೆಯಲ್ಲಿ ಬರ ಪರೀಶಿಲನೆ ನಡೆಸಲಾಯಿತು. ಇಂಡಿ ತಾಲೂಕಿನ ಅಥರ್ಗಾಗೆ ಭೇಟಿ ನೀಡಿ ಕೃಷಿ ಬೆಳೆ ಹಾನಿ ಕುರಿತು ಪರಿಶೀಲನೆಯನ್ನು ಅಧಿಕಾರಿಗಳು ನಡೆಸಿದರು.ರಾಜನಾಳದಲ್ಲಿ ಸಣ್ಣ ನೀರಾವರಿ ಕೆರೆಗೆ ಭೇಟಿ ನೀಡಿ, ತಡವಲಗಾದಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿ ವಿಕ್ಷಿಸಿದರು.