ಆತ ತನ್ನ ಪಾಡಿಗೆ ತಾನಿದ್ದ. ಗೆಳೆಯರು ಗೋಲಿ ಆಡೋಣ ಬಾ ಕಣೋ ಎಂದು ಕರೆದಿದ್ದಾರೆ. ಆದರೆ ಆತ ಊಹೂಂ... ನಾನು ಬರೋದಿಲ್ಲ ಅಂತ ಹೇಳಿದ್ದಾನೆ. ಸುಮ್ಮನೆ ಹೋಗಿ ಗೋಲಿ ಆಡಿದ್ದರೆ ಆತನ ಪ್ರಾಣ ಬಹುಶಃ ಉಳಿಯುತ್ತಿತ್ತೇನೋ? ಆದರೆ ಗೋಲಿ ಆಡಲು ನಿರಾಕರಿಸಿದ್ದರಿಂದ ಕೊಲೆಯಾಗಿ ಬಿಟ್ಟ. ಇದೀಗ ಕೊಲೆಗಾರರರು ಅಂದರ್ ಆಗಿದ್ದಾರೆ.ಗೋಲಿ ಆಡಲು ನಿರಾಕರಣೆ ಮಾಡಿದ್ದಕ್ಕೆ ಸ್ನೇಹಿತನನ್ನೆ ಕೊಲೆ ಮಾಡಿದ್ದ ಪಾಪಿ ಸ್ನೇಹಿತರಿಬ್ಬರನ್ನು 24 ಗಂಟೆಯಲ್ಲಿ ಬಂಧಿಸುವಲ್ಲಿ ದಾವಣಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.