ಸಂಸದೆ ಶೋಭಾ ಕರಂದ್ಲಾಜೆ ಮಾಡಿರೋ ಕೆಲಸದಿಂದಾಗಿ ಕಾಮುಕನೊಬ್ಬನ ಬಂಧನವಾಗಿದೆ. ಇಸ್ಲಾಂಗೆ ಮತಾಂತರ ಹೊಂದುವಂತೆ ಆಗ್ರಹ ಮಾಡುತ್ತಲೇ ಕಾಸರಗೋಡು ಮೂಲದ ಯುವತಿಯೊಬ್ಬಳನ್ನು ಕಾಮುಕರು ವರ್ಷದಿಂದ ಅತ್ಯಾಚಾರ ನಡೆಸುತ್ತಿದ್ದರು. ಬೆಂಗಳೂರಿಗೆ ಕರೆದುಕೊಂಡು ಬಂದು ಅತ್ಯಾಚಾರ ನಡೆಸಿದ್ರು. ಸಂತ್ರಸ್ತೆಯು ಸಂಸದೆ ಶೋಭಾ ಕರಂದ್ಲಾಜೆಯವರನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡಿದ್ರು. ಆ ಬಳಿಕ ಸಂಸದೆ ಶೋಭಾ ಕರಂದ್ಲಾಜೆ ಕೇಸ್ ಫೈಲ್ ಮಾಡಿದ್ದು, ಇದೀಗ ಬೆಂಗಳೂರಿನಲ್ಲಿ ಮನೆ ನೀಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.