ವಿದ್ಯಾರ್ಥಿನಿಯ ಜೊತೆ ಅಸಭ್ಯವಾಗಿ ವರ್ತಿಸಿದ ಶಿಕ್ಷಕ ಅರೆಸ್ಟ್

ಶಿವಮೊಗ್ಗ| pavithra| Last Modified ಶನಿವಾರ, 2 ನವೆಂಬರ್ 2019 (13:16 IST)
: ಎಂಟನೇ ತರಗತಿಯ ವಿದ್ಯಾರ್ಥಿನಿಯ ಜೊತೆ ಅಸಭ್ಯವಾಗಿ ವರ್ತಿಸಿದ ಶಿಕ್ಷಕನೊಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ಶಿವಮೊಗ್ಗದ ಶಿಕಾರಿಪುರ ತಾಲೂಕಿನಲ್ಲಿ ನಡೆದಿದೆ.
> > ದೂದ್ಯ ನಾಯ್ಕ್ ಬಂಧಿತ ಆರೋಪಿ, ಈತ ವಿಷಯದ ಶಿಕ್ಷಕನಾಗಿದ್ದು, ಶಾಲೆಯ ಲ್ಯಾಬ್ ನಲ್ಲಿ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಇರುವುದನ್ನು ಕಂಡು ಲ್ಯಾಬ್ ಒಳಗೆ ಬಂದು ಆಕೆಯ ಹೆಗಲ ಮೇಲೆ ಕೈ ಹಾಕಿ ಅಶ್ಲೀಲ ವಿಡಿಯೋವನ್ನು ತೋರಿಸಿ ನೋಡುವಂತೆ ಹೇಳಿ ಮುತ್ತು ಕೊಡುವಂತೆ ಒತ್ತಾಯಿಸಿದ್ದಾನೆ.


ಇದರಿಂದ ಭಯಭೀತಳಾದ ವಿದ್ಯಾರ್ಥಿನಿ ಆತನಿಂದ ತಪ್ಪಿಸಿಕೊಂಡು ಬಂದು ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಶಿಕ್ಷಕನ ವಿರುದ್ಧ ದೂರು ನೀಡಿದ್ದಾಳೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :