ಆತ ಬಲು ಐನಾತಿ ಕಳ್ಳ. ತಾನು ಕಳ್ಳತನ ಮಾಡಿದ ಚಿನ್ನವನ್ನು ಮೋರಿಯಲ್ಲಿ ಬಚ್ಚಿ ಇಡುತ್ತಿದ್ದ. ಹೀಗೆ ಖತರನಾಕ್ ಐಡಿಯಾ ಮಾಡಿದ್ದ ಕಳ್ಳ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ. ಕಳವು ಮಾಡಿದ ಚಿನ್ನಾಭರಣಗಳನ್ನು ಮೋರಿಯಲ್ಲಿ ಬಚ್ಚಿಟ್ಟು ನಂತರ ಅವುಗಳನ್ನು ಮಾರಾಟ ಮಾಡಿ ಮೋಜು ಮಾಡುತ್ತಿದ್ದ ಮೋರಿ ಕಾಂತ ಸೇರಿ ಮೂವರನ್ನು ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿ 1 ಕೆಜಿ 615 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಪೀಣ್ಯ 1ನೇ ಹಂತದ ಕಾಂತರಾಜ್ ಅಲಿಯಾಸ್ ಮೋರಿ