ನಕಲಿ ಛಾಪಾ ಕಾಗದ ಮಾರುತ್ತಿದ್ದ ಆರೋಪಿಗಳನ್ನು ಬಂಧನ

bangalore| geetha| Last Modified ಭಾನುವಾರ, 21 ನವೆಂಬರ್ 2021 (21:12 IST)
ಬೆಂಗಳೂರು: ಮಾರುತ್ತಿದ್ದ ಆರೋಪಿಗಳನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೊಸ ತಿರುವು ಸಿಕ್ಕಿದೆ. ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ನಕಲಿ ಛಾಪಾ ಕಾಗದ ದಂಧೆ ನಡೆಸುತ್ತಿದ್ದ ಎನ್ನುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದ ಬಾಬು ಎಂಬ ವ್ಯಕ್ತಿಯನ್ನು ಸದ್ಯ ಎಸ್‌ಐಟಿ
ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿಧಾನಪರಿಷತ್‌ನಲ್ಲಿ ಕ್ಲೀನಿಂಗ್ ಕೆಲಸ ನಿರ್ವಹಿಸುತ್ತಿದ್ದ ಬಾಬು ಪತ್ನಿ ಸೀಮಾ ಈಗಾಗಲೇ ಬಂಧನಕ್ಕೊಳಗಾಗಿದ್ದಾಳೆ. ಸೀಮಾ ಬಂಧನದ ನಂತರ ಆರೋಪಿ ಬಾಬು ಛಾಪಾ ಕಾಗದವನ್ನು ಪಡೆದು, ವಿಧಾನಸೌಧದ ಆವರಣದಲ್ಲೇ ಮಾರುತ್ತಿದ್ದ ಎಂಬ ಸತ್ಯ ಬಯಲಾಗಿದೆ.
ಬಾಬು ಏನು ಕೆಲಸ ಮಾಡುತ್ತಾನೆಂದು ಯಾರಿಗೂ ಹೇಳುತ್ತಿರಲಿಲ್ಲ. ಸದ್ಯ ಎಸಿಪಿ ಸಕ್ರಿ ನೇತೃತ್ವದಲ್ಲಿ ರಚನೆಯಾಗಿರುವ ಎಸ್‌ಐಟಿ ತಂಡ ಬಂಧಿತರಿಂದ 63 ಲಕ್ಷ ರೂ. ಮೌಲ್ಯದ ಛಾಪಾ ಕಾಗದ ಜಪ್ತಿ ಮಾಡಿದ್ದು, ಬಾಬು ಸೇರಿ ಐವರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :