ರಾಜಧಾನಿಯ ಕುಮಾರಕೃಪ ರಸ್ತೆ ಮತ್ತು ಚಿತ್ರಕಲಾ ಪರಿಷತ್ನ ಆವರಣದಲ್ಲಿ ಜನೇವರಿ 6 ರಂದು ಚಿತ್ರಸಂತೆ ನಡೆಯಲಿದೆ. ಚಿತ್ರಕಲಾ ಪರಿಷತ್ ವತಿಯಿಂದ ವಾರ್ಷಿಕ ಚಿತ್ರಸಂತೆ ಜ. 6 ರಂದು ನಡೆಯಲಿದೆ ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಕೃಪ ರಸ್ತೆ ಮತ್ತು ಚಿತ್ರಕಲಾ ಪರಿಷತ್ನ ಆವರಣದಲ್ಲಿ ಚಿತ್ರಸಂತೆ ನಡೆಯಲಿದೆ ಎಂದು ಹೇಳಿದರು. ಈ ವರ್ಷದ ಆಕರ್ಷಕ ಚಿತ್ರ ಸಂತೆಯನ್ನು ಮಹಾತ್ಮಗಾಂಧಿ ಅವರಿಗೆ ಸಮರ್ಪಣೆ ಮಾಡಲಾಗಿದೆ.