ಬೆಂಗಳೂರು : ಮನುಷ್ಯನ ದೇಹ ಯಾವುದೇ ಉಪಯೋಗವಿಲ್ಲವೆಂದು ಹೊರಹಾಕುವ ಮೂತ್ರದಿಂದ ಸಿರಾಮಿಕ್ ಮೆರುಗು ಹೆಚ್ಚಿಸಬಹುದು ಎಂದು ಅನ್ವೇಷಣೆಯೊಂದರಿಂದ ತಿಳಿದುಬಂದಿದೆ. ಬಹಳ ಹಿಂದಿನ ಕಾಲದಲ್ಲಿ ಮಡಿಕೆಗಳನ್ನು ಮಾಡುವಾಗ ಬೂದಿ, ಸೋಡಾ ಮತ್ತು ಮರಳಿನ ಮಿಶ್ರಣಗಳನ್ನು ಬಳಸಿ ಅದಕ್ಕೆ ಹೊಳಪು ಕೊಡುತ್ತಿದ್ದರು. ನಂತರ ಪೀಳಿಗೆಯವರು ಸ್ವಲ್ಪ ಮುಂದುವರಿದು ಗಾಜು ಮತ್ತು ಆಕ್ಸೈಡ್ ಮಿಶ್ರಣಗಳ ಸಹಾಯದಿಂದ ಮೆರಗು ನೀಡುತ್ತಿದ್ದರು. ಆದರೆ ಇದೀಗ ಮೂತ್ರದಲ್ಲಿ ಕಂಡುಬರುವ ಗ್ಲೇಜಸ್, ಮಣ್ಣಿನ ಅಂಶಗಳು ಸಿರಾಮಿಕ್ ಮೇಲ್ಮೈಯಲ್ಲಿ ಹೊಳಪು, ಅಪಾರದರ್ಶಕ