ಗೋಕಾಕ ನಲ್ಲಿರೋ ಸರ್ವಾಧಿಕಾರ ಮನೋಭಾವನೆಯನ್ನು ಕೊನೆಗಾಣಿಸುವುದೇ ನನ್ನ ರಾಜಕೀಯ ನಡೆಯ ಗುರಿ. ಅದಕ್ಕೆ ನಾನು ಯಾವಾಗಲೂ ಬದ್ಧ. ಹೀಗಂತ ಬಿಜೆಪಿ ಮುಖಂಡ ಅಶೋಕ ಪೂಜಾರಿ ಹೇಳಿದ್ದಾರೆ.ಸರ್ವಾಧಿಕಾರತ್ವದ ವಿರುದ್ಧ ನನ್ನ ಹೋರಾಟವಿದ್ದು, ಮುಂದೆಯೂ ಇರುತ್ತದೆ. ಪ್ರಸ್ತುತ ರಾಜಕೀಯದ ಬಗ್ಗೆ ಹಿಂಬಾಲಕರಿಗೆ ಮತ್ತು ಅಭಿಮಾನಿಗಳಿಗೆ ಯಾವುದೇ ಗೊಂದಲ ಬೇಕಿಲ್ಲ. ಅಕ್ಟೋಬರ್ 16 ರಿಂದ 30 ರವರೆಗೆ ಗೋಕಾಕ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಭಾಗಕ್ಕೆ ಭೇಟಿ ನೀಡುವೆ. ಮತದಾರರೊಂದಿಗೆ ಚರ್ಚಿಸಿ ಅವರ ಅನಿಸಿಕೆಗಳನ್ನು ಸಂಗ್ರಹಿಸುವೆ.