ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪುಟ್ಗೋಸಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಅಶ್ವಥ್ ನಾರಾಯಣ್ ಟಾಂಗ್ ನೀಡಿದ್ದಾರೆ. ಕೇಂದ್ರ ಸರ್ಕಾರದ 33ಸಾವಿರ ಕೋಟಿ ಹಗರಣವನ್ನೇ ಮೋದಿ ತನಿಖೆಗೆ ಕೊಟ್ಟಿಲ್ಲ, ಜಾಯಿಂಟ್ ಪಾರ್ಲಿಮೆಂಟ್ ಕಮಿಟಿ ಮಾಡೋದಕ್ಕೆ ಪ್ರಧಾನಿ ಮೋದಿ ಒಪ್ಪಿಕೊಂಡಿಲ್ಲ. ಇನ್ನೂ ಕೇಂದ್ರ ಸರ್ಕಾರದ 30ಸಾವಿರ ಕೋಟಿ ಹಗರಣದ ಮುಂದೆ ಈ 20ಲಕ್ಷ ಪ್ರಕರಣ ಇದ್ಯಾವ ಪುಟಗೋಸಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದರು.