ಬಾಡಿಗೆ ಮನೆ ಕೇಳುವ ನೆಪ; ಮಹಿಳೆಗೆ ಎಂಥಾ ಗತಿ ಬಂತು?

ಬೆಂಗಳೂರು, ಗುರುವಾರ, 28 ಫೆಬ್ರವರಿ 2019 (20:44 IST)

ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯೊಬ್ಬರಿಗೆ ಮಾಡಬಾರದ ಕೆಲಸ ಮಾಡಿ, ದೋಚಿಕೊಂಡು ಪರಾರಿಯಾಗಿದ್ದಾರೆ.

ಒಂಟಿಯಾಗಿದ್ದ ಮಹಿಳೆಯನ್ನು ಕೊಲೆ ಮಾಡಿ, ಚಿನ್ನಾಭರಣ ದೋಚಿ ಪರಾರಿಯಾದ ದುರ್ಘಟನೆ ದೊಡ್ಡಬಳ್ಳಾಪುರದ ದೊಡ್ಡಬೆಳವಂಗಲದಲ್ಲಿ ನಡೆದಿದೆ.

ದೊಡ್ಡಬೆಳವಂಗಲದ ಚೆನ್ನಮ್ಮ (64) ಕೊಲೆಯಾದವರು. ಚೆನ್ನಮ್ಮ ಅವರ ಪತಿ ಮೃತಪಟ್ಟು ಮಕ್ಕಳು ಬೆಂಗಳೂರಿನಲ್ಲಿ ನೆಲೆಸಿದ್ದರಿಂದ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು.

ಆರ್ಥಿಕವಾಗಿ ಸ್ಥಿತಿವಂತರಾಗಿದ್ದ ಚೆನ್ನಮ್ಮ ಅವರಿಗೆ ದೊಡ್ಡಬೆಳವಂಗಲ ಬಸ್ ನಿಲ್ದಾಣದ ಬಳಿ ಎರಡು ಮನೆ ಇವೆ.  ಒಂದರಲ್ಲಿ ತಾವು ವಾಸವಾಗಿದ್ದರು. ಮತ್ತೊಂದು ಮನೆಯನ್ನು ಬಾಡಿಗೆ ಕೊಟ್ಟಿದ್ದರು. ಇತ್ತೀಚೆಗೆ ಮನೆ ಖಾಲಿಯಾಗಿದ್ದು, ದುಷ್ಕರ್ಮಿಗಳು ಬಾಡಿಗೆ ಕೇಳುವ ನೆಪದಲ್ಲಿ ಬಂದು ಮಹಿಳೆಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯುದ್ಧ ಸನ್ನಿವೇಶ; ಕರ್ತವ್ಯದ ಕರೆಗೆ ಓಗೊಟ್ಟ ವೀರ ಸೈನಿಕರು

ಭಾರತ ಮತ್ತು ಪಾಕಿಸ್ತಾನ ದೇಶದ ನಡುವೆ ಯುದ್ಧ ಸನ್ನಿವೇಶ ನಿರ್ಮಾಣವಾಗಿದೆ. ಈ ಸಾಧ್ಯತೆ ಹಿನ್ನೆಲೆ ಧೀಡಿರನೆ ...

news

ನಾನು ಲೋಕಸಭೆ ಅಭ್ಯರ್ಥಿ ಅಲ್ಲ ಅಂತ ಸಚಿವ ಪದೇ ಪದೇ ಹೇಳ್ತಿರೋದು ಏಕೆ?

ನಾನು ಲೋಕಸಭೆ ಚುನಾವಣೆಯ ಅಭ್ಯರ್ಥಿ ಅಲ್ಲ. ಹೀಗಂತ ಸಚಿವರೊಬ್ಬರು ಆಗಾಗ್ಗೆ ಹೇಳಿಕೆ ಕೊಡುತ್ತಿರುವುದು ...

news

ವಿಂಗ್ ಕಮಾಂಡರ್ ಸುರಕ್ಷತೆಗಾಗಿ ಟೆಂಗಿನಕಾಯಿ ಒಡೆದು ಪ್ರಾರ್ಥನೆ

ಪಾಕ್‌ ಸೇನೆಯ ವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಲೆಂದು ಪ್ರಾರ್ಥನೆ ...

news

ಕೇಂದ್ರ ಬರ ಅಧ್ಯಯನ ತಂಡಕ್ಕೆ ಬೆವರಿಳಿಸಿದವರಾರು?

ಕೇಂದ್ರ ಬರ ಅಧ್ಯಯನ ತಂಡ ರಾಜ್ಯದ ವಿವಿಧೆಡೆ ಬೆಳೆ ಹಾನಿ, ಮೇವು ಬ್ಯಾಂಕ್, ಕೆರೆಗಳಿಗೆ ಭೇಟಿ ನೀಡುತ್ತಿದೆ. ...