ವಿಧಾನಸಭೆಯ ಕಲಾಪದಲ್ಲಿ ಡೈರಿ ವಿವಾದ ಕೋಲಾಹಲ ಸೃಷ್ಟಿಸಿದ ಬೆನ್ನಲ್ಲೆ ವಿಧಾನಪರಿಷತ್ನಲ್ಲೂ ಡೈರಿ ಗಲಾಟೆ ಪ್ರತಿಧ್ವನಿಸಿತು. ನಿಲುವಳಿ ಸೂಚನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ಏರ್ಪಟ್ಟು ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ವಿಧಾನಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಡೈರಿ ಗದ್ದಲ ಭುಗಿಲೆದ್ದಿತು. ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಡೈರಿ ವಿಷಯದ ಬಗ್ಗೆ ಚರ್ಚಿಸಲು ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡುವಂತೆ ಸಭಾಧ್ಯಕ್ಷರಲ್ಲಿ ಕೋರಿದರು. ಈಶ್ವರಪ್ಪ