ಡೈರಿ ವಿಷಯ ಚರ್ಚೆಗೆ ಅವಕಾಶ ಕೊಡುತ್ತಿಲ್ಲ ಎಂದು ಬಿಜೆಪಿ ಮುಖಂಡರು ಧರಣಿ ಮುಂದುವರಿಸಿದ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪವನ್ನು ಸ್ಪೀಕರ್ ಕೆ.ಬಿ.ಕೋಳಿವಾಡ್ ಸೋಮುವಾರಕ್ಕೆ ಮುಂದೂಡಿದ್ದಾರೆ. ಸ್ಪೀಕರ್ ಕೋಳಿವಾಡ್ ತಮ್ಮ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಪಕ್ಷಗಳ ನಾಯಕರ ಸಭೆ ಕರೆದು ಸಂಧಾನಕ್ಕೆ ಪ್ರಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಕಲಾಪವನ್ನು ಮುಂದೂಡಿದ್ದಾರೆ. ಡೈರಿಯ ಬಗ್ಗೆ ಸದನದಲ್ಲಿ ಚರ್ಚೆಯಾಗುವವರೆಗೆ ಸದನದ ಕಲಾಪ ನಡೆಯಲು ಬಿಡುವುದಿಲ್ಲ. ಚರ್ಚೆ ನಡೆದಲ್ಲಿ ಸಚಿವರ ಬ್ರಹ್ಮಾಂಡ್ ಭ್ರಷ್ಟಾಚಾರ ಬಯಲಾಗುತ್ತದೆ