ಮಂಡ್ಯ : ಟಿಪ್ಪು ಹೊಡೆದಾಕಿದ ಹಾಗೆ ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕೆಂದು ಹೇಳಿದ್ದ ಮಾಜಿ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಮೈಸೂರಿನ ದೇವರಾಜ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದೀಗ ದೇವರಾಜ ಪೊಲೀಸರು ಸ್ಥಳ ಮಹಜರ್ ಬಳಿಕ ಈ ಕೇಸ್ ಅನ್ನು ಮಂಡ್ಯಗೆ ವರ್ಗಾವಣೆ ಮಾಡಿದ್ದಾರೆ.