ಆಪರೇಷನ್ ಕಮಲ ವಿಚಾರವಾಗಿ ಸಿಎಂ ಹೇಳಿಕೆ ವಿಚಾರಕ್ಕೆ ಆಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದ್ದಾರೆ.ನಿಮಗೆ ಗೊತ್ತಿದೆ.ಬಿಜೆಪಿ ಯಾವ ಆಪರೇಷನ್ ಕೂಡ ಮಾಡ್ತಿಲ್ಲ.ಕಾಂಗ್ರೆಸ್ ನವರು ಅವರಿಗವರೇ ಆಪರೇಷನ್ ಮಾಡ್ತಿದ್ದಾರೆ.ಕಾಂಗ್ರೆಸ್ ಪಕ್ಷದಲ್ಲಿ ಅವರವರೇ ಷಡ್ಯಂತ್ರ ಮಾಡಿಕೊಳ್ತಿದ್ದಾರೆ.ಕಾಂಗ್ರೆಸ್ನಲ್ಲಿ ಭವಿಷ್ಯ ಇಲ್ಲ ಅನ್ನೋದು ಗೊತ್ತಾಗ್ತಿದೆ.ಐದು ಡಿಸಿಎಂ ಬೇಕು ಅನ್ನೋದು.ಅವರಲ್ಲೇ ಗೊಂದಲ ಇದೆ.ಸಿದ್ದರಾಮಯ್ಯ ಅವರು ಗಮನ ಬೇರೆಡೆ ಸೆಳೆಯಲು ಅವರ ಫೇಲ್ಯೂರ್ ಡೈವರ್ಟ್ ಮಾಡೋಕೆ ಮುಂದಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಅಶ್ವಥ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.