ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ ದೇಶದ ಜನತೆ ಒಗ್ಗಟ್ಟು ಪ್ರದರ್ಶಿಸಲು ಪ್ರಧಾನಿ ನರೇಂದ್ರ ಮೋದಿ ದೀಪ ಬೆಳಗಲು ಕರೆ ನೀಡಿದ್ದು, ಮನೆಯಲ್ಲಿನ ಲೈಟ್ ಮಾತ್ರ ಬಂದ್ ಮಾಡಿ, ಮೇನ್ ಸ್ವಿಚ್ ಆನ್ ಇರಲಿ ಎಂದು ಜೆಸ್ಕಾಂ ತಿಳಿಸಿದೆ. ದೇಶದ ಪ್ರಧಾನಮಂತ್ರಿಯವರು ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ ದೇಶದ ಜನತೆ ಒಗ್ಗಟ್ಟು ಪ್ರದರ್ಶಿಸಲು ರವಿವಾರ ಏಪ್ರಿಲ್ 5 ರಂದು ರಾತ್ರಿ 9 ಗಂಟೆಯಿಂದ 9 ನಿಮಿಷದ ವರೆಗೆ ತಮ್ಮ ಮನೆಯ ವಿದ್ಯುತ್ ದೀಪಗಳನ್ನು ಆರಿಸುವಂತೆ