ರಾಜ್ಯದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆಕಾಂಕ್ಷಿಗಳ ಪಟ್ಟಿ ಬಿಡುಗಡೆಗೆ ಬಿಜೆಪಿ ನಾನಾ ತಂತ್ರಗಳನ್ನ ಮಾಡ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಬ್ಯಾಕ್ ಟು ಬ್ಯಾಕ್ ಸಭೆಗಳನ್ನ ಮಾಡಿದ್ರು ಇನ್ನು ಪಟ್ಟಿ ಬಿಡುಗಡೆಗೆ ಹೈಕಮಾಂಡ್ ಯಾಕೆ ಮನಸ್ಸು ಮಾಡ್ತಿಲ್ಲಾ ಅನ್ನೋದು ರಾಜ್ಯ ನಾಯಕರಿಗೆ ತಲೆ ಬಿಸಿಯಾಗ್ತಿದೆ. ಕೊನೆಯ ಸಮಯದಲ್ಲೂ ಸರ್ವೆ ನಡೆಸಿ ಮಾಹಿತಿ ಪಡೆದುಕೊಳ್ತಿದ್ದಾರೆ ಹೈಕಮಾಂಡ್ ನಾಯಕರು.