ಜಾಮೀನಿನಿಂದ ಹೊರಬಂದಿದ್ದ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಹಲ್ಲೆ

ಶಿವಮೊಗ್ಗ| Hanumanthu.P| Last Modified ಮಂಗಳವಾರ, 16 ಜನವರಿ 2018 (20:08 IST)
ಹಲ್ಲೆ ಪ್ರಕರಣದಲ್ಲಿ ಜಾಮೀನಿನಿಂದ ಹೊರಬಂದಿದ್ದ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಗ್ರಾಮ ಪಂಚಾಯ್ತಿ ಸದಸ್ಯ ಆಸೀಫ್‌ ಗವಟೂರಿನಲ್ಲಿರುವ ತಮ್ಮ ಮನೆಗೆ ಹೋಗುವಾಗ ಎರಡು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ತೀವ್ರವಾಗಿ ಥಳಿಸಿ ಪರಾರಿ ಆಗಿದ್ದಾರೆ.


ಗಾಯಗೊಂಡಿರುವ ಆಸೀಫ್‌ನನ್ನು ಮಣಿಪಾಲ್‌ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆಸೀಫ್ ಒಂದು ತಿಂಗಳ ಹಿಂದೆ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ್ದ. ಇದೇ ಕಾರಣದಿಂದ

ಆಸೀಫ್‌ ಮೇಲೆ ಹಲ್ಲೆ ನಡೆದಿರಬಹುದು ಎನ್ನಲಾಗಿದೆ.


ಪ್ರಕರಣ ದಾಖಲಿಸಿಕೊಂಡಿರುವ ರಿಪ್ಪನ್‌ಪೇಟ ಪೊಲೀಸರು ನಾಲ್ವರನ್ನು ವಶಪಡಿಸಿಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :