ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ದಾಳಿ ನಡೆಸಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿಯಲ್ಲಿ ಪಿಂಕ್ ಗ್ರಾನೈಟ್ ಬ್ಲಾಕ್ ಗಳು ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವುದು ಪತ್ತೆಯಾಗಿದೆ. ಅಕ್ರಮ ಗಣಿಗಾರಿಕೆ ಮೇಲೆ ರಾಯಚೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಶ್ವನಾಥ, ಜಯರಾಮೇಗೌಡರ ಮತ್ತು ಲಿಂಗಸೂಗುರ ಸಹಾಯಕ ಆಯುಕ್ತರಾದ ಎಂ, ಪಿ ಮಾರುತಿ ನೇತೃತ್ವದಲ್ಲಿ ಜಂಟಿ ದಾಳಿ ನಡೆಸಲಾಗಿದೆ. ಲಿಂಗಸುಗುರ ತಾಲೂಕಿನ ಮಕಾಪುರ ಗ್ರಾಮದಲ್ಲಿ ದಾಳಿ ನಡೆದಿದೆ.