ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಸ್ಟೇಟಸ್ ಹಾಕಿದ್ದಕ್ಕೆ ಯುವಕನೋರ್ವನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಈ ಘಟನೆ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ನಡೆದಿದೆ. ರಾಘವೇಂದ್ರ ಪೂಜಾರ ಹಲ್ಲೆಗೊಳಗಾದ ಯುವಕ. ಕಾಂಗ್ರೆಸ್ ಕಾರ್ಯಕರ್ತರಾದ ಮಲ್ಲರಡ್ಡಿ ಅಗಸನಕೊಪ್ಪ, ಶ್ರೀನಿವಾಸ ಅಗಸನಕೊಪ್ಪ ಮತ್ತು ಹಲವರ ವಿರುದ್ಧ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಕಾರ್ಯಕರ್ತರು, ರಾಘವೇಂದ್ರ ಪೂಜಾರ ಅವರ ಮನೆಗೆ ನುಗ್ಗಿ, ಪ್ರಧಾನಿ ಮೋದಿಯವರ ಭಾವಚಿತ್ರ ಸ್ಟೇಟಸ್ ಇಡ್ತೀಯಾ, ಮೋದಿ