ಸಾಲದ ಹಣ ವಾಪಾಸ್ ಕೇಳಿದ್ದ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ಮುನ್ನೆಕೊಳಲು ಸಮೀಪದ ಜೆಆರ್ಎಂ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ವೆಂಕಟೇಶಪ್ಪ ಕೊಲೆಯಾದ ದುರ್ದೈವಿ. ಕೊಲೆಯಾದ ವೆಂಕಟೇಶಪ್ಪ, ಶಿವಪ್ಪ ಅಲಿಯಾಸ್ ಮೇಷ್ಟ್ರು ಎಂಬವರಿಗೆ ನಂಜುಂಡ ರೆಡ್ಡಿ ಹಾಗೂ ಪ್ರಕಾಶ್ ಎಂಬವರ ಕಡೆಯಿಂದ ಸಾಲ ಕೊಡಿಸಿದ್ದರು. ಈ ಸಾಲಕ್ಕೆ ಸಂಬಂಧಿಸಿದಂತೆ ಶಿವಪ್ಪ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಈ ಸಂಬಂಧ ಸಾಲಗಾರರೊಂದಿಗೆ ಶಿವಪ್ಪ ವಾಸವಾಗಿದ್ದ ಅಪಾರ್ಟ್ಮೆಂಟ್ ಬಳಿಗೆ ತೆರಳಿದ್ದರು. ಈ ವೇಳೆ ಕ್ರಿಕೆಟ್ ಬ್ಯಾಟ್ನಿಂದ