ಖೋಟಾ ನೋಟು ಚಲಾವಣೆಗೆ ಯತ್ನಿಸಿದ ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನು ಪೊಲೀಸ್ ರು ವಶಕ್ಕೆ ಪಡೆದಿದ್ದಾರೆ.ದಾವಣಗೆರೆ ನಗರದಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನು ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಸಿಗಂದೂರೇಶ್ವರಿ ಹೋಟೆಲ್ ನಲ್ಲಿ ಚಲಾವಣೆಗೆ ಯತ್ನ ಮಾಡಲಾಗಿದೆ. ಟಿಫನ್ ಮಾಡಿ 500 ರೂ. ನೋಟು ನೀಡಿದ್ದ ವ್ಯಕ್ತಿ. ಖೋಟಾ ನೋಟು ನೋಡಿ ದಂಗಾದ ಹೋಟೆಲ್ ಮಾಲಿಕ. ಬಳಿಕ ನೋಟಿನ ಬಗ್ಗೆ ವಿಚಾರಣೆ ನಡೆಸಿದ್ದಾರೆ.