ಪಡಿತರ ಅಕ್ಕಿ ಲಾರಿಗಳಲ್ಲಿ ಅಕ್ರಮ ಸಾಗಾಟವಾಗುತ್ತಿದೆ ಮಾಹಿತಿ ನೀಡುತ್ತೇನೆ ಎಂದು ಕರೆದು ಆಹಾರ ನಿರೀಕ್ಷಕರ ಮೇಲೆ ಕೊಲೆ ಪ್ರಯತ್ನ ನಡೆಸಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ದಾವಣಗೆರೆ ಆರ್ ಎಂ ಸಿ ಯಾರ್ಡ್ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಬ್ದುಲ್ ರೆಹಮಾನ್(ಅಬು)(32), ಮಹಮ್ಮದ್ ಯೂನಸ್(24), ಜಾಫರ್(21) ಬಂಧಿತ ಆರೋಪಿಗಳಾಗಿದ್ದಾರೆ.ಘಟನೆ ಹಿನ್ನಲೆ: ಆವರಗೆರೆ ಹೊರವಲಯದ ಉತ್ತಮ್ ಚಂದ್ ಬಡಾವಣೆಯಲ್ಲಿ ಇದೇ 24 ರಂದು ರಾತ್ರಿ ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಾಟ ಆಗುತ್ತಿದೆ