ಬೆಂಗಳೂರು : ಪರಶುರಾಮ್ ಮಿಲಿಟರಿಯಲ್ಲಿ ಸೇವೆ ಸ್ಲಲಿಸಿ ನಿವೃತ್ತನಾಗಿದ್ದ. ಆತನ ಬಳಿ ಗನ್ ಲೈಸೆನ್ಸ್ ಸಹ ಇತ್ತು. ಮಂಗಳವಾರ ರಾತ್ರಿ ಸುಮಾರು 12.00 ಗಂಟೆಗೆ ತನ್ನ ಸ್ನೇಹಿತೆಯ ಮನೆಗೆ ನುಗ್ಗಿದ್ದ. ಈ ವೇಳೆ ಆ ಮಹಿಳೆಯ ಪುತ್ರ ಸೂರಜ್ ಹಾಗೂ ಪರಶುರಾಮ್ ನಡುವೆ ವಾಗ್ವಾದ ನಡೆದಿತ್ತು. ಮಹಿಳೆಯೊಂದಿಗೆ ಅನೈತಿಕ ಸಂಬಂಧಿವಿಟ್ಟುಕೊಂಡಿದ್ದನ್ನು ಪ್ರಶ್ನಿಸಿದ ಮಹಿಳೆಯ ಪುತ್ರನ ಮೇಲೆ ನಿವೃತ್ತ ಯೋಧನೊಬ್ಬ ಗುಂಡು ಹಾರಿಸಿ ಕೊಲ್ಲಲು ಯತ್ನಿಸಿರುವ ಘಟನೆ ಗಂಗಮ್ಮನ ಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.