ದಕ್ಷಿಣ ಕನ್ನಡ ಜಿಲ್ಲೆ/ ಮಂಗಳೂರು ಹೊರವಲಯದ ದೇರಳಕಟ್ಟೆಯಲ್ಲಿ ಅಪ್ರಾಪ್ತ ಬಾಲಕನೊಬ್ಬ 18 ವರ್ಷದ ವಿದೇಶಿ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ವರದಿಯಾಗಿದೆ. ಪಾನೀರು ಆಶ್ರಮಕ್ಕೆ ಅಧ್ಯಯನ ನಡೆಸಲು ಬಂದಿದ್ದ ಜರ್ಮನ್ ಮೂಲದ ಯುವತಿಯ ಮೇಲೆ ಅಪ್ರಾಪ್ತನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದನ್ನು ಕಂಡ ಸಾರ್ವಜನಿಕರು ಬಾಲಕನನ್ನು ಮನಬಂದಂತೆ ಥಳಿಸಿ ಉಲ್ಲಾಳ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಹಾಡಹಗಲೇ ಅಪ್ರಾಪ್ತ ಬಾಲಕನೊಬ್ಬ ವಿದೇಶಿ ಯುವತಿಯ ಮೇಲೆ ಅತ್ಯಾಚಾರವೆಸಗಲು ಯತ್ನಿಸುತ್ತಿರುವುದು ಕಂಡ ಸಾರ್ವಜನಿಕರು