ಜನರಿಗೆ ನ್ಯಾಯ ಕೊಡಿಸಬೇಕಾಗಿದ್ದ ವಕೀಲೆ ತನಗೇ ನ್ಯಾಯಸಿಕ್ಕಿಲ್ಲವೆಂದು ಸುಪ್ರೀಂಕೋರ್ಟ್ ಆವರಣದಲ್ಲಿ ವಿಷ ಸೇವಿಸಿದ ದಾರುಣ ಘಟನೆ ವರದಿಯಾಗಿದೆ. ತಮ್ಮ ಮೇಲೆ ಗ್ಯಾಂಗ್ ರೇಪ್ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ನ್ಯಾಯಸಿಕ್ಕಿಲ್ಲವೆಂದು ಹೇಳಿದ ವಕೀಲ ಸುಪ್ರೀಂಕೋರ್ಟ್ ಆವರಣದಲ್ಲಿ ಫೀನೈಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಮಹಿಳೆಯನ್ನು ಕೂಡಲೇ ರಾಮ್ ಮನೋಹರ ಲೋಹಿಯಾ ಆಸ್ಪತ್ರೆಗೆ ಸೇರಿಸಲಾಯಿತು. 2022ರ ನವೆಂಬರ್ನಲ್ಲಿ ತನ್ನ ಸಂಬಂಧಿಗಳು ತನ್ನ ಮೇಲೆ ಗ್ಯಾಂಗ್ ರೇಪ್ ಮಾಡಿದರು ಎಂದು ವಕೀಲೆ ಆರೋಪಿಸಿದ್ದಾರೆ.