ಟಯರ್ ಬ್ಲಾಸ್ಟ್ ಆದರೂ ಸಹ ಚಾಲಕನೊಬ್ಬ ಕಿ.ಮೀಟರುಗಟ್ಟಲೇ ರಿಮ್ ನಲ್ಲಿ ಅತಿವೇಗವಾಗಿ ಕಾರು ಚಲಾಯಿಸಿದ ಘಟನೆ ಇಂದು ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಂದಿರಾನಗರದಿಂದ ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ಯುವಕನೊಬ್ಬ ಮನಸೋ ಇಚ್ಚೆ ತನ್ನ ಟಯೋಟಾ ಗ್ಲಾಂಜಾ ಕಾರು ಚಲಾಯಿಸಿದ್ದು ಕಾರಿನ ವೇಗಕ್ಕೆ ಟಯರ್ ಬ್ಲಾಸ್ಟ್ ಆಗಿದೆ. ಆದರೂ ಸಹ ರಿಮ್ ನಲ್ಲೆ ಕಾರು ಚಲಾಯಿಸಿದ್ದಾನೆ. ಸುಮಾರು 100-120 ಕಿಲೋಮೀಟರ್ ವೇಗದಲ್ಲಿ ಸಾಗುತ್ತಿದ್ದ