ಆಗಸ್ಟ್ 9ಕ್ಕೆ ನೂತನ ಸಿಎಂ ಪ್ರಮಾಣ ವಚನ?

bengaluru| Geethanjali| Last Modified ಗುರುವಾರ, 22 ಜುಲೈ 2021 (14:27 IST)
ಜುಲೈ 26ಕ್ಕೆ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಲಿದ್ದು, ಆಗಸ್ಟ್ 9ರವರೆಗೆ ಹಂಗಾಮಿಯಾಗಿ ಮುಂದುವರಿಯಲಿದ್ದಾರೆ
ಎಂದು ಮೂಲಗಳು ತಿಳಿಸಿವೆ.
ಸಿಎಂ ಬಿಎಸ್ ವೈ ರಾಜೀನಾಮೆ ರಾಜೀನಾಮೆ ನೀಡಲು ಸಮಯ ನಿಗದಿಯಾಗಿದ್ದು, ಜುಲೈ 25ರಂದು ಅಧಿಕೃತವಾಗಿ ಹೈಕಮಾಂಡ್ ನಿಂದ ಸೂಚನೆ ಬರಲಿದ್ದು, ಜುಲೈ 26ರ ಬೆಳಿಗ್ಗೆ 11 ಗಂಟೆಗೆ ಸಿಎಂ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ.
ಜುಲೈ 26ಕ್ಕೆ ಸಿಎಂ ಆಗಿ ಯಡಿಯೂರಪ್ಪ 2 ವರ್ಷ ಪೂರೈಸಲಿದ್ದು, ಹೈಕಮಾಂಡ್ ನಿಂದ ಸಂದೇಶ ಬರುತ್ತಿದ್ದಂತೆ ಬಿಎಸ್ ವೈ ರಾಜೀನಾಮೆ ನೀಡಲಿದ್ದಾರೆ. ಆದರೆ ಆಷಾಢ ಮಾಸವಾಗಿರುವುದರಿಂದ ಆಗಸ್ಟ್ 8ರವರೆಗೆ ಸಿಎಂ ಸ್ಥಾನದಲ್ಲಿ ಹಂಗಾಮಿಯಾಗಿ ಮುಂದುವರಿಯಲಿದ್ದಾರೆ ಎಂದು ಹೇಳಲಾಗಿದೆ.
ಸಿಎಂ ಸ್ಥಾನಕ್ಕೆ ಉತ್ತರ ಕರ್ನಾಟಕದ ಹಲವರು ಪೈಪೋಟಿ ನಡೆಸಿದ್ದು, ಪ್ರಹ್ಲಾದ್ ಜೋಷಿ, ಉಮೇಶ್ ಕತ್ತಿ, ಬಸನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ, ಅರವಿಂದ್ ಬೆಲ್ಲದ್ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ. ಈ ನಡುವೆ ಒಕ್ಕಲಿಗ ಸಮುದಾಯದ ನಾಯಕನಿಗೆ ಸಿಎಂ ಸ್ಥಾನ ಕೊಡಬೇಕು ಎಂಬ ವರಸೆ ಶುರುವಾಗಿದ್ದು, ಅಶೋಕ್ ಹಾಗೂ ಅಶ್ವಥ್ ನಾರಾಯಣ್ ಹೆಸರು ಚಾಲ್ತಿಗೆ ಬರುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :