ಎಐಸಿಸಿ ಭಾವಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಔರಂಗಜೇಬರಿಗೆ ಹೋಲಿಸುವುದು ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿಯವರನ್ನು ಔರಂಗಜೇಬರಿಗೆ ಹೋಲಿಸುವುದು ಸರಿಯಲ್ಲ. ನಾವೇನು ವಂಶಪಾರಂಪರ್ಯ ಅಡಳಿತ ನಡೆಸುತ್ತಿಲ್ಲ ಎಂದರು. ಅನಂತ ಕುಮಾರ್ ಹೆಗಡೆ ಕೇಂದ್ರ ಮಂತ್ರಿಯಾಗಲು ನಾಲಾಯಕ್. ಕೇಂದ್ರ ಮಂತ್ರಿಯಾದವರು ಅಸಂಸದೀಯ ಭಾಷೆ ಬಳಸಬಾರದು. ನನಗೂ ಕೆಟ್ಟ ಭಾಷೆಯಲ್ಲಿ ಮಾತನಾಡಲು ಬರುತ್ತದೆ. ಆದರೆ, ಅಂತಹ ಭಾಷೆ ರಾಜಕಾರಣಿಗಳು ಬಳಸಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.