ಮೇವು ಲೂಟಿ ಹಗರಣದಲ್ಲಿ ಕೋಟಿ ಕೋಟಿ ಹಣ ಲೂಟಿ ಹೊಡೆದ ಅಧಿಕಾರಿಗಳಿಗೆ ಲಕ್ವ ಹೊಡೆಯಲಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಘೋರ ಶಾಪ ಹಾಕಿದ್ದಾರೆ. ಖಾಸಗಿ ಸುದ್ದಿ ಚಾನೆಲ್ನಲ್ಲಿ ಮೇವು ಮತ್ತು ಗೋಶಾಲೆ ನಿರ್ಮಾಣದಲ್ಲಿ ತುಮಕೂರು ಜಿಲ್ಲೆಯೊಂದರಲ್ಲಿಯೇ 22 ಕೋಟಿ ರೂಪಾಯಿ ಅವ್ಯವಹಾರವಾಗಿದೆ ಎನ್ನುವ ವರದಿ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದೆ. ಮೇವು ವಿತರಣೆಯಲ್ಲಿ ಲೂಟಿ, ಗೋಶಾಲೆ ನಿರ್ಮಾಣದಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಲೂಟಿ ಹೊಡೆದಿದ್ದರೂ ಸರಕಾರ ಮೌನವಾಗಿದೆ.