ಪ್ರಯಾಣಿಕರು ಮರೆತುಹೋದ ವಸ್ತುಗಳನ್ನ ಆಟೋ ಚಾಲಕರು ಹಿಂದಿರುಗಿಸಿದ ಅನೇಕ ಉದಾಹರಣೆಗಳನ್ನ ನೋಡಿರುತ್ತೀರಿ. ಆದರೆ ತಾನು ಮಾಡಿಕೊಂಡಿದ್ದ ಸಾಲ ತೀರಿಸಲು ಪ್ರಯಾಣಿಕನ ಹಣದ ಬ್ಯಾಗ್ ಸಮೇತ ಪರಾರಿಯಾಗಿದ್ದ ಆಟೋ ಚಾಲಕನನ್ನ ಮಲ್ಲೇಶ್ವರಂ ಠಾಣಾ ಪೊಲೀಸರು ಬಂಧಿಸಿದ್ದಾರೆ.