ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 18 ವರ್ಷ ತುಂಬಿದ ಎಲ್ಲಾ ಯುವಕ/ಯುವತಿಯರು ಮತದಾರರ ಪಟ್ಟಿಯಲ್ಲಿ ನೋಂದಣಿ/ಸೇರ್ಪಡೆಯಾಗುವ ಸಲುವಾಗಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ, ದಕ್ಷಿಣ ವಲಯ ಜಯನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಅಪಾರ್ಟ್ ಮೆಂಟ್ ಗಳು, ರಾಗಿ ಗುಡ್ಡ ಬಳಿಯಿರುವ ಕೊಳಗೇರಿ ಪ್ರದೇಶ, ಕಾರ್ಪೊರೇಷನ್ ಕಾಲೋನಿ ಸೇರಿದಂತೆ ಇನ್ನಿತರೆ ಪ್ರದೇಶಗಳಿಗೆ ವಲಯ ಉಪ ಆಯುಕ್ತರಾದ ಶ್ರೀಮತಿ ಲಕ್ಷ್ಮೀ ದೇವಿ ರವರ ನೇತೃತ್ವದಲ್ಲಿ ಮತದಾರ ನೋಂದಣಾಧಿಕಾರಿ, ಸಹಾಯಕಮತದಾರ