Widgets Magazine

ಚುನಾವಣಾ ಪ್ರಚಾರದಿಂದ ದೂರ ಉಳಿದ ಕೈ ಶಾಸಕ ಬಿ.ನಾಗೇಂದ್ರ

ವಿಜಯನಗರ| pavithra| Last Modified ಶುಕ್ರವಾರ, 29 ನವೆಂಬರ್ 2019 (10:04 IST)
: ಡಿಸೆಂಬರ್ 5 ರಂದು ವಿಜಯನಗರ ಕ್ಷೇತ್ರದ ಉಪಚುನಾವಣೆ ಹಿನ್ನಲೆ ಕೈ ಶಾಸಕ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.ಹೌದು. ನಿನ್ನೆ ವಿಜಯನಗರ ಕ್ಷೇತ್ರದಲ್ಲಿ ವಿಪಕ್ಷ ನಾಯಕ ಚುನಾವಣಾ ಪ್ರಚಾರ ಮಾಡಿದ್ದಾರೆ. ಆ ವೇಳೆ ಜಿಲ್ಲೆಯ ಎಲ್ಲ ಕಾಂಗ್ರೆಸ್ ಶಾಸಕರು ಪ್ರಚಾರದಲ್ಲಿ ಭಾಗವಹಿಸಿ ಸಿದ್ದರಾಮಯ್ಯರಿಗೆ ಸಾಥ್ ನೀಡಿದ್ದರು.


ಆದರೆ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಬಿ. ನಾಗೇಂದ್ರ ಅವರು ಮಾತ್ರ ಪ್ರಚಾರಕ್ಕೆ ಗೈರಾಗಿದ್ದು. ಅವರ ಜೊತೆ ಮಾಜಿ ಸಚಿವ ಸಂತೋಷ ಲಾಡ್ ಕೂಡ ಗೈರಾಗಿದ್ದರು. ನಾಗೇಂದ್ರ ಅವರ ಈ ನಡೆ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎನ್ನಲಾಗಿದೆ.  

ಇದರಲ್ಲಿ ಇನ್ನಷ್ಟು ಓದಿ :