ಬೆಂಗಳೂರು: ದ.ಕ. ಜಿಲ್ಲೆಯಲ್ಲಿ ಕೋಮು ಗಲಭೆಗಳಿಗೆ ಉಸ್ತುವಾರಿ ಸಚಿವ ರಮಾನಾಥ್ ರೈ ಅವರೇ ಕಾರಣ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸುತ್ತಿದ್ದರೆ, ಅದೇ ಸಚಿವರಿಗೆ ರಾಜ್ಯದ ಗೃಹ ಇಲಾಖೆಯ ಹೊಣೆ ನೀಡಲಾಗಿದೆ.ಜಿ. ಪರಮೇಶ್ವರ್ ರಿಂದ ತೆರವಾದ ಗೃಹ ಸಚಿವರ ಪಟ್ಟಕ್ಕೆ ರಮಾನಾಥ್ ರೈ ಅವರನ್ನು ಸಿಎಂ ಸಿದ್ದರಾಮಯ್ಯ ನೇಮಿಸಿದ್ದಾರೆ. ಇದರೊಂದಿಗೆ ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಗಲಭೆಗಳನ್ನು ನಿಯಂತ್ರಿಸಲು ಸಚಿವರಿಗೇ ಹೊಣೆ ನೀಡಲಾಗಿದೆ.ಕಳೆದ ಎರಡು ದಿನಗಳಿಂದ ರಮಾನಾಥ್ ರೈ ಗೃಹ ಸಚಿವರಾಗುತ್ತಾರೆ