ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬುಸ್ ಬುಸ್ ಹಾವು ಬಿಡುವುದರಲ್ಲಿ ನಿಸ್ಸೀಮರು ಎಂದು ನೀರಾವರಿ ಖಾತೆ ಸಚಿವ ಎಂ.ಬಿ.ಪಾಟೀಲ್ ಲೇವಡಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಸಂಪನ್ಮೂಲ ಇಲಾಖೆಯಲ್ಲಿ ಯಾವುದೇ ಹಗರಣಗಳೇ ನಡೆದಿಲ್ಲ. ಹಗರಣಗಳು ನಡೆದಿಲ್ಲವೆಂದಾದ ಮೇಲೆ ಯಾವ ದಾಖಲೆಗಳನ್ನು ಬಿಡುಗಡೆ ಮಾಡ್ತಾರೆ? ದಿನನಿತ್ಯ ಹಗರಣ ದಾಖಲೆಗಳನ್ನು ಬಿಡುಗಡೆ ಮಾಡ್ತೇನೆ ಎಂದು ಪೂಸಿ ಬಿಡುತ್ತಾ ರಾಜಕೀಯ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ತಿಕೋಟಾದಲ್ಲಿ ನನ್ನ ವಿರುದ್ಧ ಇಂದು ಹಗರಣ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು